ಉರಿಗೆದರು (ಬಸುರು ನಂಜು)-	
ಬಸುರಿನಲ್ಲೋ ಹೆರಿಗೆಯಲ್ಲೋ ಹೆರಿಗೆಯ ನಂತರದ 24 ಗಂಟೆಗಳಲ್ಲೋ ಕಾಣಿಸಿಕೊಳ್ಳುವ ಸೆಳವಿನ ಬಸುರು ರಕ್ತನಂಜು (ಎಕ್ಲಾಂಪ್ಸಿಯ). ಮೈಯಲ್ಲಿ ಉಬ್ಬರ ಕಾಣಿಸಿಕೊಂಡು ರಕ್ತ ಒತ್ತಡವೇರಿ ಕೋಳೆಮೂತ್ರದೊಂದಿಗೆ (ಅಲ್ಬುಮಿನೂರಿಯ) ಮುಖ್ಯವಾಗಿ ಸೆಳವು ಬರುವುದು. ಬೇಗನೆ ಚಿಕಿತ್ಸೆ ಆಗದಿದ್ದಲ್ಲಿ ಕೂಸಿಗೂ ಬಸುರಿಗೂ ಮಾರಕ. 
(ನೋಡಿ- ಹೆರಿಗೆ-ವಿಜ್ಞಾನ) 

ಇದಕ್ಕೆ ಮುಖ್ಯ ಕಾರಣ ಜರಾಯುವಿನಲ್ಲಿರುವ ತೀವ್ರ ವ್ಯತ್ಯಾಸ. ಹೇಗೆ ಬರುತ್ತದೆ ಎಂದು ಇದುವರೆಗೂ ತಿಳಿದಿಲ್ಲ. ಸದ್ಯಕ್ಕೆ ಸಂಪೂರ್ಣ ಚಿಕಿತ್ಸೆ ಲಭ್ಯವಿಲ್ಲ. ಗರ್ಭಿಣಿಗೆ ಸಂಪೂರ್ಣ ವಿಶ್ರಾಂತಿ, ಉಪ್ಪು/ಖಾರ/ಮಸಾಲೆಯನ್ನು ಕಡಿಮೆ ಕೊಡುವುದು ಹಾಗೂ ಕೆಲವು ಔಷಧಿಗಳನ್ನು ಅನುಸರಿಸಲಾಗುತ್ತದೆ. ಆದರೂ ಬಾರದಂತೆ ತಡೆಯುವ ಅಥವಾ ಬಂದ ಮೇಲೆ ಪೂರ್ಣ ಉಪಶಮನಕ್ಕಾಗಿ ಯಾವುದೇ ಚಿಕಿತ್ಸೆ ಇಲ್ಲ.								
(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ